Home
WELCOME TO TOWN MUNICIPAL COUNCIL ATHANI WEBSITE
ಅಥಣಿ ಪಟ್ಟಣದ ಬಗ್ಗೆ :-
ಅಥಣಿ ಪಟ್ಟಣವು ತಾಲೂಕಾ ಕೇಂದ್ರ ಸ್ಥಾನವಾಗಿದ್ದು, ಈ ಪುರಸಭೆಯು ಸನ್ 1853 ರಲ್ಲಿ ಸ್ಥಾಪನೆವಾಗಿರುತ್ತದೆ. ಇದು ಬೆಳಗಾವಿಯಿಂದ 149 ಕಿ.ಮೀ.ಅಂತರ ಇರುತ್ತದೆ.ಈ ಪಟ್ಟಣಕ್ಕೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.ಈ ಪಟ್ಟಣದ ಜನಸಂಖ್ಯೆಯು 2001 ರ ಜನಗಣತಿಯ ಪ್ರಕಾರ 39,235(ಗಂಡು 19,914 ಮತ್ತು ಹೆಣ್ಣು 19,321) ಇರುತ್ತದೆ.ಅಥಣಿ ಪಟ್ಟಣದ ಸರಾಸರಿ ಸಾಕ್ಷರತೆಯ ಪ್ರಮಾಣ 77.7%(ಗಂಡು 87.1% ಮತ್ತು ಹೆಣ್ಣು 68.2%)ಇರುತ್ತದೆ.ಅಥಣಿ ಪಟ್ಟಣದ ಸರಾಸರಿ ಮಳೆಯ ಪ್ರಮಾಣ 475.3 ಮೀ.ಮೀ. ಇರುತ್ತದೆ .ಅಥಣಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮ ನೀರ್ದೆಶಿತ ಸದಸ್ಯರಿರುತ್ತಾರೆ. ಅಥಣಿ ಪುರಸಭೆ ವ್ಯಾಪ್ತಿಯಲ್ಲಿ ಸುಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನ ಮತ್ತು ಶ್ರೀ ಮುರಘೇಂದ್ರ ಶಿವಯೋಗಿಗಳ ಮಠ ಇರುತ್ತದೆ. ಅಥಣಿ ತಾಲೂಕ ವ್ಯಾಪ್ತಿಯಲ್ಲಿ ಕೃಷ್ಣಾ , ಕೆಂಪವಾಡ ಮತ್ತು ರೇಣುಕಾ ಸಕ್ಕರೆ ಕಾರಖಾನೆಗಳು ಇರುತ್ತವೆ.
Brief About Athani TMC:-
The Town Municipal Council Athani was constituted in 1853. It has 39,235 population(Male 19,914 and Female 19,321) according to the census of 2001 and at a distance of 149 KM from Belgaum. The Town Municipal Council has 23 wards and equal number of Councilors.The Town Municipal Council Athani Literacy Rate is 77.7%(Male 87.1% and Female 68.2%). TMC has 23 wards and equal numbers of councilors and 5 number of Nominee councilors.Athani town has the famous Siddeshwar Temple and Shree Murgendra Shivayogi Math.Athani taluk limit 3 Sugar factory are here. Athani is one of 74 Karnataka Cities in the Karnataka Municipal Reforms Project - Municipal eGovernance project. Each of the 74 cities will get a comprehensive website other important modules to be launched by September 2007 are Property Tax, Financial Accounting GIS mapping, Municipal Reforms Project is a partnership between the Urban Development, eGovernments Foundation and Survey of India.These computer based systems coupled with accountability and smoother delivery of services to citizens of Karnataka.
ಸಾರ್ವಜನಿಕ ಪ್ರಕಟಣೆ 22.75%,7.25% & 3%
ದಿನಾಂಕ:17-11-2011ರಂದು ಅಥಣಿ ಪಟ್ಟಣದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯ ಪ್ರಾರಂಭವಾಗಿರುತ್ತದೆ.ಸಾರ್ವಜನಿಕ ತಮ್ಮ ಸರಿಯಾದ ಮಾಹಿತಿಯನ್ನು ಗಣತಿದಾರರಿಗೆ ನೀಡಿ ಸಹಕರಿಸಬೇಕು.
ದಿನಾಂಕ:15-09-2011:- ಪುರಸಭೆ ಅಥಣಿ ವ್ಯಾಪ್ತಿಯಲ್ಲಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
ಆಧಾರ ಯೋಜನೆ:- ಪುರಸಭೆ ಅಥಣಿ ವ್ಯಾಪ್ತಿಯಲ್ಲಿ "ಆಧಾರ ಗುರುತಿನ ಚೀಟಿ" ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
ಶ್ರೀ ಕೆ.ಬಿ.ಬೀರಣಗಿ ಕೆ.ಎಮ್.ಎ.ಎಸ್ ಮುಖ್ಯಾಧಿಕಾರಿಗಳು ಪುರಸಭೆ ಅಥಣಿ ಇವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆ ಪ್ರಕಾರ ಪುರಸಭೆ ಅಥಣಿ ಸಿಬ್ಬಂದಿಗಳಿಗೆ ಭೃಷ್ಟಾಚಾರ ಜಾಗೃತಿ ಕುರಿತು ಅರಿವು ಮೂಡಿಸಲು ಪ್ರತಿಜ್ಞಾ ವಿಧಿಯನ್ನು ಕಚೇರಿಯಲ್ಲಿ ದಿನಾಂಕ 31/10/2011 ರಂದು 11.00 ಘಂಟೆಗೆ ಬೋಧಿಸಿದರು
" This Page is maintained by: Shri.K.B.Biranagi KMAS Chief Officer TMC Athani."

